You see them everywhere: on buses, note cards, television shows, books, and even coffee cups. Quotes have infiltrated our very world and are excellent ways of showcasing a unique thought, idea, or inspiration. Many individuals are at a loss when it comes to actually using quotes in everyday aspects of their lives, but fear not! There are a million different uses for your favorite quote.
Quotes do not have to be stodgy, historic, or dated. Many individuals see historians with wire rimmed glasses spouting off famous quotes while teaching lessons to a class of under-eager students. Quite to the contrary, quotes can add a spark of fun in your life!
Contents
Kannada Quotes – ಕನ್ನಡದ ಕೆಲವು ಪ್ರಸಿದ್ಧ ವ್ಯಕ್ತಿಗಳು
೧ .ಡಾ.ಎಂ. ಚಿದಾನಂದಮೂರ್ತಿ (Dr.M.Chidananda Murthy)
ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರ “ಹೊಸತು
ಹೊಸತು” ಎಂಬ ಕೃತಿಗೆ ೧೯೯೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಚಿದಾನಂದಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಹಿರೋಕೋಗಲೂರು ಎಂಬ ಗ್ರಾಮದಲ್ಲಿ ೧೯೩೧ರ ಮೇ ೧೦ ರಂದು ಜನಿಸಿದರು. ಎಮ್.ಎ. ಪದವಿ ಹಾಗು ಪಿ.ಎಚ್.ಡಿ ಪದವಿಗಳನ್ನು ಸಂಪಾದಿಸಿ ಮೊದಲು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿ ಹಿಡಿದವರು.
ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದು ಸ್ವಇಚ್ಛೆಯಿಂದ ನಿವೃತ್ತರಾದರು. ಕೆಲ ಕಾಲ ಅಮೆರಿಕದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು.
ಚಿದಾನಂದಮೂರ್ತಿಯವರು ಅನೇಕ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಇಂತಿವೆ: ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಶೂನ್ಯಸಂಪಾದನೆಯನ್ನು ಕುರಿತು, ಭಾಷಾವಿಜ್ಞಾನದ ಮೂಲತತ್ವಗಳು, ಸಂಶೋಧನ ತರಂಗ, ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ, ಪೂರ್ಣ ಸೂರ್ಯಗ್ರಹಣ, ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಗ್ರಾಮೀಣ. “ಕನ್ನಡ ಸಂಸ್ಕೃತಿ-ನಮ್ಮ ಹೆಮ್ಮೆ” ಈ ಗ್ರಂಥವು ಒಂಬತ್ತು ಭಾಷೆಗಳಿಗೆ ಅನುವಾದವಾಗಿದೆ.
ಚಿದಾನಂದಮೂರ್ತಿಯವರು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹಾಗು ಇನ್ನೂರೈವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇವರ ಆರು ಕೃತಿಗಳು ಬಹುಮಾನಿತವಾಗಿವೆ. ಐವತ್ತಕ್ಕು ಹೆಚ್ಚು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡ ನಿಘಂಟು ಸಂಪಾದಕ ಸಮಿತಿಯ ಸದಸ್ಯರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಚಳುವಳಿ ಅಥವಾ ವಿಷಯಗಳಲ್ಲಿ ಹೋರಾಟಕ್ಕಿಳಿದಿದ್ದಾರೆ ಹಾಗು ತಮ್ಮ ಅಭಿಪ್ರಾಯಗಳನ್ನು ನಿರ್ದಾಕ್ಷಿಣ್ಯವಾಗಿ ನೀಡುತ್ತಿರುತ್ತಾರೆ.
೨ . ಕೆ.ವಿ.ಸುಬ್ಬಣ್ಣ (K.V.Subbanna) :
ಕೆ.ವಿ.ಸುಬ್ಬಣ್ಣನವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡುವಿನಲ್ಲಿ ಸ್ಥಾಪಿಸಿದರು.
೩ . ದೊಡ್ಡರಂಗೇಗೌಡ (Doddarange Gowda)
ದೊಡ್ಡರಂಗೇಗೌಡ – ಕನ್ನಡದ ಕವಿಗಳಲ್ಲೊಬ್ಬರು ಮತ್ತು ಚಿತ್ರಸಾಹಿತಿಗಳಲ್ಲೊಬ್ಬರು.
ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ ೧೯೪೫ರಲ್ಲಿ ಜನಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಇವರು, ನಂತರ ಕನ್ನಡದಲ್ಲಿ ನವೋದಯ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸಿದರು. ಇವರ ಈ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್ಡಿ(ಡಾಕ್ಟರೇಟ್) ಪದವಿ ದೊರಕಿತು.
ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಚಲನಚಿತ್ರಗಳು
* ರಂಗನಾಯಕಿ ,ಪರಸಂಗದ ಗೆಂಡೆತಿಮ್ಮ,ಆಲೆಮನೆ ,ಅನುಪಮ ,ಅರುಣರಾಗ , ಮುದುಡಿದ ತಾವರೆ ಅರಳಿತು , ಏಳು ಸುತ್ತಿನ ಕೋಟೆ ,ಅಶ್ವಮೇಧ ,ದಯಗೀತೆ
* ಭೂಲೋಕದಲ್ಲಿ ಯಮರಾಜ ,ಜನುಮದ ಜೋಡಿ ,ಕುರುಬನ ರಾಣಿ ,ರಮ್ಯ ಚೈತ್ರಕಾಲ,ತಂದೆಗೆ ತಕ್ಕ ಮಗ,
ದೊಡ್ಡರಂಗೇಗೌಡ ಗೀತಸಾಹಿತ್ಯ ಒದಗಿಸಿರುವ ಕೆಲವು ಭಾವಗೀತೆ ಆಲ್ಬಂಗಳು
* ಮಾವು-ಬೇವು , ಭೂಮಿ-ಬಾನು , ಪ್ರಾಯ ಮೂಡಿತು
೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಕನ್ನಡದ ಕೆಲವು ಪ್ರಸಿದ್ಧ ವ್ಯಕ್ತಿಗಳು
೪. ಬಿ.ಕೆ.ಸುಮಿತ್ರಾ (B.K.Sumitra)
ಕನ್ನಡ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯರಲ್ಲಿ ಬಿ.ಕೆ.ಸುಮಿತ್ರಾ ಒಬ್ಬರು.ಸಂಗೀತದ ಎಲ್ಲ ಪ್ರಕಾರಗಳಲ್ಲೂ ಹಾಡಿರುವ ಹೆಗ್ಗಳಿಕೆ ಇವರದು.ಬಿ.ಕೆ.ಸುಮಿತ್ರಾ ಹುಟ್ಟಿದ್ದು ಜುಲೈ ೧,೧೯೪೬ ರಂದು ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ.ತಂದೆ ಪಟೇಲ್ ಕೃಷ್ಣಯ್ಯ,ತಾಯಿ ಗಂಗಮ್ಮ.ಓದಿದ್ದು ಬಿಎಸ್ಸಿ,ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ.ಕಾಲೇಜಿನಲ್ಲಿ ಓದುತ್ತಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಗೀತೆಗಳನ್ನು ಕೇಳಿ ಸಂಗೀತಾಭ್ಯಾಸ ಶುರು.ಜಾನಪದಗೀತೆ,ಭಕ್ತಿಗೀತೆ,ಭಾವಗೀತೆ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.ಮುಂದಿನ ದಿನಗಳಲ್ಲಿ ಕುವೆಂಪು,ದ.ರಾ.ಬೇಂದ್ರೆ,ಜಿ.ಎಸ್.ಶಿವರುದ್ರಪ್ಪ…ಮೊದಲಾದ ಕವಿಗಳ ಕವಿತೆಗಳನ್ನು ಆಕಾಶವಾಣಿ,ದೂರದರ್ಶನ,ಧ್ವನಿಸುರುಳಿ,ಸಿ.ಡಿ.ಗಳಿಗಾಗಿ ಹಾಡಿದರು.ದೇಶ-ವಿದೇಶಗಳಲ್ಲಿ ಅನೇಕ ಕನ್ನಡಕೂಟಗಳಿಗಾಗಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.
ಜಿ.ಕೆ.ವೆಂಕಟೇಶ್ ರವರ ಸಂಗೀತ ನಿರ್ದೇಶನದ ಕವಲೆರಡು ಕುಲವೊಂದು ಚಿತ್ರದಿಂದ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.ಹೆಚ್.ಎಂ.ವಿ.,ಸಿ.ಬಿ.ಎಸ್.,ಸಂಗೀತ.,ಲಹರಿ ಮುಂತಾದ ಧ್ವನಿಸುರುಳಿ ಸಂಸ್ಥೆಗಳಿಗೆ ಹಾಡಿದ್ದಾರೆ.ಉದುಪಿಯ ಕೃಷ್ಣ,ಧರ್ಮಸ್ಥಳದ ಮಂಜುನಾಥ,ಎಡೆಯೂರು ಸಿದ್ಧಲಿಂಗೇಶ್ವರ..ಮುಂತಾದ ಭಕ್ತಿಗೀತೆಗಳನ್ನು ಹಾಡಿದ್ದಾರೆ.ಪತಿ ಸುಧಾಕರ್.ಮಗಳು ಸೌಮ್ಯ ಖ್ಯಾತ ಬಾಲಿವುಡ್ ಗಾಯಕಿ.ಮಗ ಸುನೀಲ್ರಾವ್ ಕನ್ನಡದ ಉದಯೋನ್ಮುಖ ಚಿತ್ರನಟ.
* ಲಾವಣ್ಯ ಲೇಖಕರ ಬಳಗದಿಂದ ಗಾನಕೋಗಿಲೆ ಪ್ರಶಸ್ತಿ.
* ಕೆಂಪೇಗೌಡ ಪ್ರಶಸ್ತಿ.
* ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ.
* ರಾಜ್ಯೋತ್ಸವ ಪ್ರಶಸ್ತಿ.
೫.ಮೈಸೂರು ಅನಂತಸ್ವಾಮಿ (Mysore Anantaswamy) :
ಅನಂತಸ್ವಾಮಿ ಹುಟ್ಟಿದ್ದು ಪ್ರಸಿದ್ಧ ಸಂಗೀತಗಾರ ಚಿಕ್ಕ ರಾಮರಾವ್ರವರ ಮನೆತನದಲ್ಲಿ, ಮೈಸೂರಿನಲ್ಲಿ.ತಂದೆ ಸುಬ್ಬರಾಯರು,ತಾಯಿ ಕಮಲಮ್ಮ.ಬಾಲ್ಯದಿಂದಲೇ ಸುಗಮ ಸಂಗೀತದಲ್ಲಿ ಅಪಾರ ಆಸಕ್ತಿ.ಆ ಕಾಲದ ಜನಪ್ರಿಯ ಜಾನಪದ ಸಂಗೀತ ಹಾಡುಗಾರ ಪಿ.ಕಾಳಿಂಗರಾವ್ರವರ ಕಂಪೆನಿಯಲ್ಲಿ ಕೆಲಕಾಲ ಮ್ಯಾಂಡೋಲಿನ್ ವಾದಕರಾಗಿದ್ದರು.ಅಲ್ಲಿಂದ ಸುಗಮ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದ ಇವರು ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.ಅನೇಕ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು.ನಂತರದಲ್ಲಿ ತಾವೇ ಸಂಗೀತ ಸಂಯೋಜನೆ ಮಾಡಿದರು.ಕನ್ನಡದ ಪ್ರಸಿದ್ಧ ಕವಿಗಳ ಕವನಗಳಿಗೆ ಧ್ವನಿಯಾದರು.ಕನ್ನಡ ಕವಿಗಳ ಭಾವಗೀತೆಗಳನ್ನು ಜನಪ್ರಿಯಗೊಳಿಸಲು ತಮ್ಮನ್ನು ತಾವೇ ಮುಡಿಪಾಗಿರಿಸಿಕೊಂಡರು.ಈ ಕವನಗಳನ್ನು ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನೆ-ಮನಗಳಿಗೂ ತಲುಪಿಸಿ,ಆ ಮೂಲಕ ಹೊಸಯುಗಕ್ಕೆ ನಾಂದಿ ಹಾಡಿದರು.ಇವರು ಸಂಯೋಜನೆ ಮಾಡಿರುವ ರಾಗಗಳು ಆಯಾ ಗೀತೆಗಳ ಭಾವಕ್ಕೆ ತಕ್ಕಂತೆ ಸೂಕ್ತವಾಗಿದ್ದು ,ಅವುಗಳ ಅರ್ಥಗಳನ್ನು ಹೆಚ್ಚು ಸಮರ್ಥವಾಗಿ ಹೊರಚೆಲ್ಲುತ್ತವೆ. ಇವರ ಸಂಗೀತ ನಿರ್ದೇಶನ ಮತ್ತು ಗಾಯನದ ಸುಮಾರು ೨೬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ.
೬ . ಸು.ರಂ. ಎಕ್ಕುಂಡಿ (S.R.Lakkundi)
ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ.
ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು.
ಪುರಸ್ಕಾರ
“ಲೆನಿನ್ನರ ನೆನಪಿಗೆ” ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.
“ಮತ್ಸ್ಯಗಂಧಿ” ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
“ಬೆಳ್ಳಕ್ಕಿಗಳು” ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.
“ಬಕುಲದ ಹೂವುಗಳು” ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
Kannada Quotes
೬ . ಬಿ.ಸಿ.ರಾಮಚಂದ್ರ ಶರ್ಮ (B.C.Ramachandra sharma)
ಬಿ.ಸಿ.ರಾಮಚಂದ್ರ ಶರ್ಮ – ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೋಗಾದಿ ಚಂದ್ರಶೇಖರಶರ್ಮ.
ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಲಂಡನ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಏಳು ವರ್ಷಗಳ ಕಾಲ ಇಂಗ್ಲಂಡಿನಲ್ಲಿ, ಎಂಟು ವರ್ಷ ಝಾಂಬಿಯಾ ಹಾಗು ಯುನೆಸ್ಕೊದಲ್ಲಿ ಸೇವೆ ಸಲ್ಲಿಸಿದ್ದಾರೆ.
ಪುರಸ್ಕಾರ
* ಇವರ “ಸಪ್ತಪದಿ” ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
* “ನೆರಳು” ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.
* “ಸೆರಗಿನ ಕೆಂಡ” ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ.
* ಇದಲ್ಲದೆ ಹಿಂದುಸ್ತಾನ್ ಟೈಮ್ಸ್ ಪ್ರಶಸ್ತಿ ಹಾಗು ಪ್ರಜಾವಾಣಿ ಪ್ರಶಸ್ತಿ ಸಹ ಲಭಿಸಿವೆ.
ಕವನ ಸಂಕಲನಗಳು :
* ಏಳು ಸುತ್ತಿನ ಕೋಟೆ, ಹೇಸರಗತ್ತೆ ,ಬ್ರಾಹ್ಮಣ ಹುಡುಗ,ಸಪ್ತಪದಿ,ಹೃದಯಗೀತ, ಮಾತು ಮಾಟ
ನಾಟಕಗಳು
* ಬಾಳಸಂಜೆ ,ನೀಲಿ ಕಾಗದ,ನೆರಳು,ವೈತರಣಿ,ಸೆರಗಿನ ಕೆಂಡ (ರೇಡಿಯೊ ನಾಟಕ)
ಕಥಾ ಸಂಕಲನ
* ಮಂದಾರ ಕುಸುಮ,ಏಳನೆಯ ಜೀವ,ಕತೆಗಾರನ ಕತೆ,
ಅನುವಾದ
* ಈ ಶತಮಾನದ ನೂರು ಇಂಗ್ಲಿಷ್ ಕವನಗಳು , ಮನಃಶಾಸ್ತ್ರ
೭. ಗೊ. ರು. ಚನ್ನಬಸಪ್ಪ (G.R.Channabasappa)
ಗೊ. ರು. ಚನ್ನಬಸಪ್ಪ
ಕಾವ್ಯನಾಮ :ಗೊರುಚ
ಜನನ :೧೮ ಮೇ ೧೯೩೦
ತಂದೆ :ರುದ್ರಪ್ಪಗೌಡ
ತಾಯಿ:ಅಕ್ಕಮ್ಮ
ಜನ್ಮ ಸ್ಥಳ :ಗೊಂಡೇದಹಳ್ಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು.
೧೯೪೮ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಸಿಕೊಂಡರು.
ಗಾಂಧೀಗ್ರಾಮದಲ್ಲಿ ಸಮಾಜಶಿಕ್ಷಣವನ್ನು ಕುರಿತು ತರಬೇತಿ ಗೊರುಚರವರು ಪಡೆದಿದ್ದಾರೆ.
ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
ಕಸಾಪದ ಅಧ್ಯಕ್ಷರಾಗಿದ್ದಾಗ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ೧೫೦ಕ್ಕೂ ಹೆಚ್ಚಿನ ಗ್ರಂಥಗಳ ಪ್ರಕಟಣೆಗೆ ಕಾರಣರಾದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗಳಿಗೆ ಹೆಡ್ ಕ್ವಾಟರ್ಸ್ ಕಮೀಷನರಾಗಿದ್ದರು.
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ, ಹಿಂಡು ಬೆದರ್ ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದಕಲೆಗಳು
ಪ್ರಬಂಧ, ವಿಮರ್ಶಾ ಗ್ರಂಥಗಳು:
ಕರ್ನಾಟಕ ಜನಪದಕಲೆಗಳು
ಪ್ರಶಸ್ತಿ, ಪುರಸ್ಕಾರ, ಬಿರುದು:
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
Kannada Quotes in Kannada Language
೮. ಸಾ.ಶಿ. ಮರುಳಯ್ಯ (S.H.Marulasiddaiah) :
ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
ಜನಾಮ/ಪೂರ್ಣನಾಮ : ಸಾಸಲು ಶಿವರುದ್ರಯ್ಯ ಮರುಳಯ್ಯ
ಜನನ : ೨೮ ಜನವರಿ ೧೯೩೧
ತಂದೆ :ಶಿವರುದ್ರಯ್ಯ
ತಾಯಿ:ಸಿದ್ಧಮ್ಮ
ಜನ್ಮ ಸ್ಥಳ :ಸಾಸಲು ಗ್ರಾಮ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ
೧೯೫೫ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಆನರ್ಸ್ ಪದವಿ.
ಪದವಿ:೧೯೫೬ ರಲ್ಲಿ ಎಂ. ಎ ಪದವಿ.
ವೃತ್ತಿ:
ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
ಬೆಂಗಳೂರು ವಿ.ವಿ. ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದಿದ್ದಾರೆ.
೧೯೭೯- ೮೩ರವರೆಗೂ ವಿಶ್ವಕೋಶದ ಪ್ರಧಾನ ಸಂಪಾದಕರಾಗಿದ್ದರು.
೧೯೮೯- ೯೦ರಲ್ಲಿ ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು.
೧೯೯೫-೯೮ರಲ್ಲಿ ಸಾಹಿತ್ಯಾ ಪರಿಷತ್ತಿನ ಅಧ್ಯಕ್ಷರಾಗಿದ್ದರು.
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:
ಶಿವತಾಂಡವ, ವಿಪರ್ಯಾಸ, ಘೋಷವತಿ, ಬೃಂದಾವನಲೀಲೆ, ರಾಸಲೀಲೆ, ರೂಪಸಿ, ಚೈತ್ರ- ಜ್ಯೋತಿ, ಬಾರೋ ಮೈಲಾರಕೆ, ಮರೀ ಬೇಡಿ, ವಿಜಯ ವಾತಾಪಿ, ಶಿವಲೀಲೆ
Kannada Quotes in Kannada Font
ಕಥನಕವನಗಳು:ಶ್ರೀ ಮರುಳಸಿದ್ಧೇಶ್ವರ ವಚನವೈಭವ
ಕಾದಂಬರಿ :ನೂಪುರಾಲಾಸ, ಪುರುಷಸಿಂಹ, ಹೇಮಕೂಟ, ಸಾಮರಸ್ಯ ಶಿಲ್ಪ, ಅನುಶೀಲನೆ.
ಕವನ ಸಂಕಲನಗಳು :ಕೆಂಗನ ಕಲ್ಲು, ಮನಿಷಾ, ನನ್ನ ಕವನಗಳು, ಸುರಭಿ
ವಿಮರ್ಶೆ, ಪ್ರಬಂಧಗಳು: ಭಾಸನ ಮಕ್ಕಳು, ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ.
ಜೀವನ ಚರಿತ್ರೆ : ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು.
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೭೧ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ಎಂಬ ಕೃತಿಗೆ ಪಿ. ಎಚ್. ಡಿ ಪದವಿ ಪಡೆದರು.
ಕೆಂಗನ ಕಲ್ಲು ಕವನ ಸಂಕಲನಕ್ಕೆ ರಾಜ್ಯ ಸರ್ಕಾರದ ಪ್ರಶಸ್ತಿ ಬಂದಿದೆ.
ಭಾಸನ ಮಕ್ಕಳು ಎಂಬ ವಿಮರ್ಶೆಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಬಂದಿದೆ.
೯ . ಸುಮತೀಂದ್ರ ನಾಡಿಗ (sumateendra Nadig):
ಇವರು ಕನ್ನಡದ ಲೇಖಕರು ಹಾಗು ಖ್ಯಾತ ವಿಮರ್ಶಕರು
ಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂಧ್ರದ ೨೦೦೬ನೇ ಸಾಲಿನ ನಿರಂಜನ ಪ್ರಶಸ್ತಿ ದೊರಕಿದೆ .
Weave quotes into your speeches and projects. Whether you are a student or are busy in the working world, use quotes to emphasize a point or create a new way of thinking.
Include quotes in your crafting explorations or hobbies. Give quotes as gifts to friends in need. Keep quotes written on slips of paper and hand them out at will. Whatever you decide to use quotes for, they will certainly enrich your life.
Quotes do not have to be stodgy, historic, or dated. Many individuals see historians with wire rimmed glasses spouting off famous quotes while teaching lessons to a class of under-eager students. Quite to the contrary, quotes can add a spark of fun in your life!
Use quotes for personalization reasons. Perhaps you have a specific quote that has become your motto over the years. Maybe you have a couple of quotes that best signify your style and your way of life. Embrace your favorite quotes and work to include them into your lifestyle.
Incorporate quotes into the design of your home. Paint words of inspiration above doorways or on blank walls. Frame treasured quotes for posterity or embroider quotes into fluffy robes so that you can remember them on brisk mornings.
Originally posted 2018-11-19 16:21:19.